ಸಿನಿಮಾ ಪ್ರಚಾರಕರ್ತ ಪತ್ರಕರ್ತರಿಗೆ ಸಾರ್ವಭೌಮ ಪ್ರಶಸ್ತಿ ಪ್ರದಾನ

ಕರ್ನಾಟಕ ಚಲನಚಿತ್ರ ಮತ್ತು ಕಿರುಚಿತ್ರ ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿ ಹಾಗೂ ಚೇತನ ಫೌಂಡೇಷನ್ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಧಾರವಾಡದ ರಂಗಾಯಣದಲ್ಲಿ ಮೂರುದಿನಗಳ ಕಾಲ ನಡೆದ ಕರ್ನಾಟಕ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪತ್ರಿಕೋದ್ಯಮ ಹಾಗೂ ಪ್ರಚಾರ ಸೇವೆಗಾಗಿ ಪುನಿತರಾಜ್‌ಕುಮಾರ ನೆನಪಿಗಾಗಿ ನೀಡುವ ‘ಸಾರ್ವಭೌಮ ಪ್ರಶಸ್ತಿ’ಯನ್ನು ಗದಗ ನಗರದ ಡಾ.ಪ್ರಭು ಗಂಜಿಹಾಳ, ಹುಬ್ಬಳ್ಳಿಯ ಡಾ.ವೀರೇಶ ಹಂಡಗಿ ಅವರಿಗೆ ನೀಡಿ ಗೌರವಿಸಲಾಯಿತು.
ಚಂದ್ರಶೇಖರ ಮಾಡಲಗೇರಿಯವರು ಮಾತನಾಡಿ ಉತ್ತರ ಕರ್ನಾಟಕದವರೇ ಅದ ಇವರು ಕೇವಲ ಎರಡು-ಮೂರು ವರ್ಷಗಳ ಅವಧಿಯಲ್ಲಿ ಕನ್ನಡ, ತಮಿಳು, ತೆಲಗು ಸೇರಿದಂತೆ ಇಪ್ಪತೈದಕ್ಕೂ ಹೆಚ್ಚು ಚಲನಚಿತ್ರಗಳು, ಕಿರುಚಿತ್ರಗಳು, ಸಾಕ್ಷಚಿತ್ರಗಳಿಗೆ ಪ್ರಚಾರ ನೀಡಿದ್ದು, ಉತ್ತರ ಕರ್ನಾಟಕದ ಪತ್ರಿಕಾ ಸಂಪರ್ಕ, ಚಲನಚಿತ್ರ ಪ್ರಚಾರಕಲೆ, ಪಿ.ಆರ್.ಓ ಆಗಿ ಜೊತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಚಾರಕಾರ್ಯದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಚಿತ್ರತಂಡಗಳಿಂದ ಯಾವ ಫಲಾಫೇಕ್ಷೆ ಇಲ್ಲದೆ ರಾಜ್ಯ, ಹೊರರಾಜ್ಯಗಳಲ್ಲೂ ಚಲನಚಿತ್ರಗಳ ಸುದ್ದಿಯನ್ನು ಮುಟ್ಟಿಸುವ ಕಾರ್ಯವನ್ನು ಮಾಡುತ್ತಿದ್ದು ಕಲಾವಿದರು ,ತಂತ್ರಜ್ಞರು, ನಿರ್ಮಾಪಕ, ನಿರ್ದೇಶಕರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದಕ್ಕಾಗಿ ನಾವು ‘ಸಾರ್ವಭೌಮ ಪ್ರಶಸ್ತಿ’ಗೆ ಆಯ್ಕೆ ಮಾಡಿದ್ದೇವೆ ಎಂದರು. ಡಾ,ಗಂಜಿಹಾಳ ಮಾತನಾಡಿ ರಾಜ್ಯದ ಎಲ್ಲ ಮಾಧ್ಯಮದ ಬಂಧುಗಳು ನಮ್ಮ ಸುದ್ದಿಯನ್ನು ಪ್ರಕಟಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಇದು ನಮಗೆ ಸಲ್ಲಬೇಕಾದ ಪ್ರಶಸ್ತಿ ಅಲ್ಲ. ಆ ಎಲ್ಲ ಸಂಪಾದಕರು, ಮಾಧ್ಯಮದ ಬಂಧು, ಮಿತ್ರರಿಗೆ ಸಲ್ಲಬೇಕಾದದ್ದು ಎಂದರು. ಡಾ.ವೀರೇಶ ಅವರು ಸಿನಿಮಾಕ್ಕೆ ಪ್ರಚಾರ ಹೆಚ್ಚು ಅಗತ್ಯ. ಇನ್ನೂ ಕೆಲವರಿಗೆ ಅದರ ಬಗ್ಗೆ ನಿರ್ಲಕ್ಷವಿದೆ. ಚಲನಚಿತ್ರದ ಕುರಿತು ಅಬಿಮಾನಿಗಳು, ಪ್ರೇಕ್ಷಕರಿಗೆ ಸುದ್ದಿ ತಲುಪಿಸಿ ಅವರನ್ನು ಚಿತ್ರಮಂದಿರಗಳತ್ತ ಸೆಳೆಯುವಂತ ಕಾರ್ಯ ಅಗಬೇಕಿದೆ ಎಂದರು. ಕಲಾಪೋಷಕರಮಠ ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿಯವರು ಸಾನಿಧ್ಯ ವಹಿಸಿ ಉತ್ತರ ಕರ್ನಾಟಕದ ಈ ಇಬ್ಬರೂ ಪ್ರಚಾರಕರಿಂದ ಇನ್ನೂ ಹೆಚ್ಚಿನ ಚಲನಚಿತ್ರಗಳು ಪ್ರಚಾರ ಪಡೆದುಕೊಳ್ಳಲಿ. ಅವರ ಕಾರ್ಯವನ್ನೂ ಚಿತ್ರನಿರ್ಮಾಪಕರು, ನಿರ್ದೇಶಕರು ಬಳಸಿಕೊಳ್ಳಲಿ ಎಂದರು. ಜನಪ್ರಿಯ ಯುವ ನಾಯಕರು, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ರಿ) ಕಾರ್ಯದರ್ಶಿ ಮಂಜುನಾಥ ಹಗೇದಾರ , ಚಲನಚಿತ್ರ ನಿರ್ದೇಶಕ ಸುರೇಶ ಹೆಬ್ಳೀಕರ್, ಚಿತ್ರಸಾಹಿತಿ ಮನ್ವರ್ಷಿ ನವಲಗುಂದ, ಚಿತ್ರ ನಿರ್ದೇಶಕ ಅರವಿಂದ ಮುಳಗುಂದ, ಮೇರು ಐಎಎಸ್,ಕೆಎಎಸ್ ಸ್ಟಡಿ ಸೆಂಟರ್ ನಿರ್ದೇಶಕ ರುದ್ರೇಶ ಮೇಟಿ,ಕಲಾಪೋಷಕರಾದ ಪೀರಸಾಬ ನದಾಫ,ಸುರೇಶ ಕೋರಕೊಪ್ಪ, ನಟಿರೂಪದರ್ಶಿ ವರ್ಷಿಣಿ ಲಕ್ಷಿತಾ, ಚಿತ್ರನಿರ್ದೇಶಕ ಮಂಜು ಪಾಂಡವಪುರ , ಕಾದಂಬರಿಕಾರ ನಟ ರಾಜು ಗಡ್ಡಿ, ನಿಂಗರಾಜ ಸಿಂಗಾಡಿ, ಮಲ್ಯ ಬಾಗಲಕೋಟ, ಸೇರಿದಂತೆ ಅನೇಕ ಕಿರುಚಿತ್ರ, ಚಲನಚಿತ್ರಗಳಿಗೆ ಸಂಬಂಧಿಸಿದ ಕಿರುಚಿತ್ರಗಳ ನಟ ನಟಿಯರು, ನಿರ್ದೇಶಕರು, ತಂತ್ರಜ್ಞರು ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸುತ್ತಿರುವ ಪತ್ರಕರ್ತರು
Advertisement

ಡಾ.ಗಂಜಿಹಾಳ ಹಾಗೂ ಡಾ.ಹಂಡಿಗಿ ಅವರಿಗೆ ಸಾರ್ವಭೌಮ ಪ್ರಶಸ್ತಿ

ಹುಬ್ಬಳ್ಳಿ : ಕರ್ನಾಟಕ ಚಲನಚಿತ್ರ ಮತ್ತು ಕಿರುಚಿತ್ರ ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿ ಹಾಗೂ ಚೇತನ ಫೌಂಡೇಷನ್ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಧಾರವಾಡದ ರಂಗಾಯಣದಲ್ಲಿ ಮೂರುದಿನಗಳ ಕಾಲ ನಡೆದ ಕರ್ನಾಟಕ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪತ್ರಿಕೋದ್ಯಮ ಹಾಗೂ ಪ್ರಚಾರ ಸೇವೆಗಾಗಿ ಪುನಿತರಾಜ್‌ಕುಮಾರ ನೆನಪಿಗಾಗಿ ನೀಡುವ ‘ಸಾರ್ವಭೌಮ ಪ್ರಶಸ್ತಿ’ಯನ್ನು ಗದಗ ನಗರದ ಡಾ.ಪ್ರಭು ಗಂಜಿಹಾಳ, ಹುಬ್ಬಳ್ಳಿಯ ಡಾ.ವೀರೇಶ ಹಂಡಗಿ ಅವರಿಗೆ ನೀಡಿ ಗೌರವಿಸಲಾಯಿತು.
ಚಂದ್ರಶೇಖರ ಮಾಡಲಗೇರಿಯವರು ಮಾತನಾಡಿ ಉತ್ತರ ಕರ್ನಾಟಕದವರೇ ಅದ ಇವರು ಕೇವಲ ಎರಡು-ಮೂರು ವರ್ಷಗಳ ಅವಧಿಯಲ್ಲಿ ಕನ್ನಡ, ತಮಿಳು, ತೆಲಗು ಸೇರಿದಂತೆ ಇಪ್ಪತೈದಕ್ಕೂ ಹೆಚ್ಚು ಚಲನಚಿತ್ರಗಳು, ಕಿರುಚಿತ್ರಗಳು, ಸಾಕ್ಷಚಿತ್ರಗಳಿಗೆ ಪ್ರಚಾರ ನೀಡಿದ್ದು, ಉತ್ತರ ಕರ್ನಾಟಕದ ಪತ್ರಿಕಾ ಸಂಪರ್ಕ, ಚಲನಚಿತ್ರ ಪ್ರಚಾರಕಲೆ, ಪಿ.ಆರ್.ಓ ಆಗಿ ಜೊತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಚಾರಕಾರ್ಯದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಚಿತ್ರತಂಡಗಳಿಂದ ಯಾವ ಫಲಾಫೇಕ್ಷೆ ಇಲ್ಲದೆ ರಾಜ್ಯ, ಹೊರರಾಜ್ಯಗಳಲ್ಲೂ ಚಲನಚಿತ್ರಗಳ ಸುದ್ದಿಯನ್ನು ಮುಟ್ಟಿಸುವ ಕಾರ್ಯವನ್ನು ಮಾಡುತ್ತಿದ್ದು ಕಲಾವಿದರು ,ತಂತ್ರಜ್ಞರು, ನಿರ್ಮಾಪಕ, ನಿರ್ದೇಶಕರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದಕ್ಕಾಗಿ ನಾವು ‘ಸಾರ್ವಭೌಮ ಪ್ರಶಸ್ತಿ’ಗೆ ಆಯ್ಕೆ ಮಾಡಿದ್ದೇವೆ ಎಂದರು. ಡಾ,ಗಂಜಿಹಾಳ ಮಾತನಾಡಿ ರಾಜ್ಯದ ಎಲ್ಲ ಮಾಧ್ಯಮದ ಬಂಧುಗಳು ನಮ್ಮ ಸುದ್ದಿಯನ್ನು ಪ್ರಕಟಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಇದು ನಮಗೆ ಸಲ್ಲಬೇಕಾದ ಪ್ರಶಸ್ತಿ ಅಲ್ಲ. ಆ ಎಲ್ಲ ಸಂಪಾದಕರು, ಮಾಧ್ಯಮದ ಬಂಧು, ಮಿತ್ರರಿಗೆ ಸಲ್ಲಬೇಕಾದದ್ದು ಎಂದರು. ಡಾ.ವೀರೇಶ ಅವರು ಸಿನಿಮಾಕ್ಕೆ ಪ್ರಚಾರ ಹೆಚ್ಚು ಅಗತ್ಯ. ಇನ್ನೂ ಕೆಲವರಿಗೆ ಅದರ ಬಗ್ಗೆ ನಿರ್ಲಕ್ಷವಿದೆ. ಚಲನಚಿತ್ರದ ಕುರಿತು ಅಬಿಮಾನಿಗಳು, ಪ್ರೇಕ್ಷಕರಿಗೆ ಸುದ್ದಿ ತಲುಪಿಸಿ ಅವರನ್ನು ಚಿತ್ರಮಂದಿರಗಳತ್ತ ಸೆಳೆಯುವಂತ ಕಾರ್ಯ ಅಗಬೇಕಿದೆ ಎಂದರು. ಕಲಾಪೋಷಕರಮಠ ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿಯವರು ಸಾನಿಧ್ಯ ವಹಿಸಿ ಉತ್ತರ ಕರ್ನಾಟಕದ ಈ ಇಬ್ಬರೂ ಪ್ರಚಾರಕರಿಂದ ಇನ್ನೂ ಹೆಚ್ಚಿನ ಚಲನಚಿತ್ರಗಳು ಪ್ರಚಾರ ಪಡೆದುಕೊಳ್ಳಲಿ. ಅವರ ಕಾರ್ಯವನ್ನೂ ಚಿತ್ರನಿರ್ಮಾಪಕರು, ನಿರ್ದೇಶಕರು ಬಳಸಿಕೊಳ್ಳಲಿ ಎಂದರು. ಜನಪ್ರಿಯ ಯುವ ನಾಯಕರು, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ರಿ) ಕಾರ್ಯದರ್ಶಿ ಮಂಜುನಾಥ ಹಗೇದಾರ , ಚಲನಚಿತ್ರ ನಿರ್ದೇಶಕ ಸುರೇಶ ಹೆಬ್ಳೀಕರ್, ಚಿತ್ರಸಾಹಿತಿ ಮನ್ವರ್ಷಿ ನವಲಗುಂದ, ಚಿತ್ರ ನಿರ್ದೇಶಕ ಅರವಿಂದ ಮುಳಗುಂದ, ಮೇರು ಐಎಎಸ್,ಕೆಎಎಸ್ ಸ್ಟಡಿ ಸೆಂಟರ್ ನಿರ್ದೇಶಕ ರುದ್ರೇಶ ಮೇಟಿ,ಕಲಾಪೋಷಕರಾದ ಪೀರಸಾಬ ನದಾಫ,ಸುರೇಶ ಕೋರಕೊಪ್ಪ, ನಟಿರೂಪದರ್ಶಿ ವರ್ಷಿಣಿ ಲಕ್ಷಿತಾ, ಚಿತ್ರನಿರ್ದೇಶಕ ಮಂಜು ಪಾಂಡವಪುರ , ಕಾದಂಬರಿಕಾರ ನಟ ರಾಜು ಗಡ್ಡಿ, ನಿಂಗರಾಜ ಸಿಂಗಾಡಿ, ಮಲ್ಯ ಬಾಗಲಕೋಟ, ಸೇರಿದಂತೆ ಅನೇಕ ಕಿರುಚಿತ್ರ, ಚಲನಚಿತ್ರಗಳಿಗೆ ಸಂಬಂಧಿಸಿದ ಕಿರುಚಿತ್ರಗಳ ನಟ ನಟಿಯರು, ನಿರ್ದೇಶಕರು, ತಂತ್ರಜ್ಞರು ಉಪಸ್ಥಿತರಿದ್ದರು.

ಚಂದ್ರಶೇಖರ ಮಾಡಲಗೇರಿ ಸಾರಥ್ಯದ ಕರ್ನಾಟಕ ಚಲನಚಿತ್ರೋತ್ಸವ ಸಂದರ್ಭದಲ್ಲಿ ಸಾರ್ವಭೌಮ ಪ್ರಶಸ್ತಿ ಸ್ವೀಕರಿಸಿದ ಉಭಯ ಪತ್ರಕರ್ತರು.

Karnataka film festival

ಕರ್ನಾಟಕ ಚಲನಚಿತ್ರೋತ್ಸವ, ಅಭೂತಪೂರ್ವ ಯಶಸ್ಸು. ಚಂದ್ರಶೇಖರ ಮಾಡಲಗೇರಿ ಹರ್ಷ ಕರ್ನಾಟಕ ಚಲನಚಿತ್ರ ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿ ಹಾಗೂ ಚೇತನ ಫೌಂಡೇಷನ್ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಧಾರವಾಡದ ರಂಗಾಯಣದಲ್ಲಿ ಮಾರ್ಚ 17 ರಿಂದ 19 ರ ವರೆಗೆ ಜರುಗಿದ ಕರ್ನಾಟಕ ಚಲನಚಿತ್ರೋತ್ಸವ ಯಶಸ್ವಿಯಾಗಿದೆ. ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ ಮುಂತಾದ ವಿಭಾಗದಲ್ಲಿ ಪ್ರಶಸ್ತಿ ಪ್ರದಾನ, ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಭಾ ಶೋಧ, ಹೊಸ ಚಿತ್ರಗಳ ಬಿಡುಗಡೆ ಮತ್ತು ಪ್ರಮೋಷನ್, ನೃತ್ಯ ಗೀತಗಾಯನ, ಚಲನಚಿತ್ರಗಳ ಪ್ರದರ್ಶನ ಸೇರಿದಂತೆ ವಿಭಿನ್ನ […]

Karnataka film festival

Karnataka film festival

ಕರ್ನಾಟಕ ಚಲನಚಿತ್ರೋತ್ಸವ, ಅಭೂತಪೂರ್ವ ಯಶಸ್ಸು. ಚಂದ್ರಶೇಖರ ಮಾಡಲಗೇರಿ ಹರ್ಷ

ಕರ್ನಾಟಕ ಚಲನಚಿತ್ರ ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿ ಹಾಗೂ ಚೇತನ ಫೌಂಡೇಷನ್ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಧಾರವಾಡದ ರಂಗಾಯಣದಲ್ಲಿ ಮಾರ್ಚ 17 ರಿಂದ 19 ರ ವರೆಗೆ ಜರುಗಿದ ಕರ್ನಾಟಕ ಚಲನಚಿತ್ರೋತ್ಸವ ಯಶಸ್ವಿಯಾಗಿದೆ. ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ ಮುಂತಾದ ವಿಭಾಗದಲ್ಲಿ ಪ್ರಶಸ್ತಿ ಪ್ರದಾನ, ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಭಾ ಶೋಧ, ಹೊಸ ಚಿತ್ರಗಳ ಬಿಡುಗಡೆ ಮತ್ತು ಪ್ರಮೋಷನ್, ನೃತ್ಯ ಗೀತಗಾಯನ, ಚಲನಚಿತ್ರಗಳ ಪ್ರದರ್ಶನ ಸೇರಿದಂತೆ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಿರುತೆರೆ, ಬೆಳ್ಳಿತೆರೆಯ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಮಾಡಲಗೇರಿಯವರು ಚಿತ್ರೋದ್ಯಮದಲ್ಲಿ ಹೊಸದೊಂದು ಭರವಸೆ ಹುಟ್ಟು ಹಾಕಿದ್ದಾರೆ.

ಕಲಾಪೋಷಕರ ಮಠ ಎಂದೇ ಖ್ಯಾತಿಯಾದ ಸಿದ್ಧನಕೊಳ್ಳ ಮಠದ ಡಾ. ಶಿವಕುಮಾರ ಸ್ವಾಮೀಜಿಯವರು ಸಾನಿಧ್ಯ ವಹಿಸಿದ್ದರು. ಜನಪ್ರೀಯ ಯುವನಾಯಕರಾದ ಮಂಜುನಾಥ ಹಗೇದಾರ ಅವರು ಚಿತ್ರೋತ್ಸವವನ್ನು ಉದ್ಘಾಟಿಸಿದರು. ಚಿತ್ರೋತ್ಸವ ಹಾಗೂ ಈ ಭಾಗದ ಚಿತ್ರಗಳಿಗೆ ಪೂರಕ ಬೆಂಬಲ ನೀಡುವುದಾಗಿ ಹೇಳಿದರು.

ಖ್ಯಾತ ಚಲನಚಿತ್ರ ನಟ ಸುರೇಶ ಹೆಬ್ಳೀಕರ, ಗೀತರಚನೆಕಾರ ಮನ್ವರ್ಷಿ ನವಲಗುಂದ, ಚಲನಚಿತ್ರ ನಿರ್ದೇಶಕ ಅರವಿಂದ ಮುಳಗುಂದ, ಪಿ ಆರ್ ಓ ಡಾ ಪ್ರಭು ಗಂಜೀಹಾಳ ಹಾಗೂ ಡಾ. ವೀರೇಶ ಹಂಡಿಗಿ ಕಲಾ ಪೋಷಕರಾದ ಪೀರಸಾಬ ನದಾಫ, ಸುರೇಶ ಕೋರಕೊಪ್ಪ, ಮೇರು ಐಎಎಸ್ ಕೆಎಎಸ್ ಸ್ಟಡಿ ಸೆಂಟರ್ ನಿರ್ದೇಶಕರದಾದ ಡಾ. ರುದ್ರೇಶ ಮೇಟಿ, ನಟಿ, ರೂಪದರ್ಶಿ ವರ್ಷಿಣಿ, ಚಿತ್ರ ನಿರ್ದೇಶಕ ಮಂಜು ಪಾಂಡವಪುರ, ಕಾದಂಬರಿಕಾರ, ನಟ ರಾಜು ಗಡ್ಡಿ, ಕಿರುಚಿತ್ರಗಳ ಖ್ಯಾತ ನಿರ್ದೇಶಕ, ನಟರಾದ ನಿಂಗರಾಜ ಸಿಂಗಾಡಿ, ಮಲ್ಯ ಬಾಗಲಕೋಟ ಮುಂತಾದವರು ಭಾಗವಹಿಸಿದ್ದರು.

ನಲವತ್ತು ಚಲನಚಿತ್ರ ಹಾಗೂ ಕಿರುಚಿತ್ರಗಳಿಗೆ ರಾಜರತ್ನ ಚಿತ್ರ ಪ್ರಶಸ್ತಿ Rajaratna film awards ನೀಡಿ ಗೌರವಿಸಲಾಯಿತು.